ರಚನೆ: ಶ್ರೀ ಪುರಂದರದಾಸರು
ರಾಗ: ಕಾಪಿ
ತಾಳ: ಆದಿ

ಆಡಿಸಿದಳೆಶೋದಾ ಜಗದೋದ್ಧಾರನ

ಜಗದೋದ್ಧಾರನ ಮಗನೆಂದು ತಿಳಿಯುತ
ಮಗುಗಳ ಮಾಣಿಕ್ಯನ ಆಡಿಸಿದಳೆಶೋದಾ

ನಿಗಮಕೆ ಸಿಲುಕದ ಅಗಣಿತ ಮಹಿಮನ
ಸುಗುಣಾಂತ ರಂಗನ ಆಡಿಸಿದಳೆಶೋದಾ

ಅಣೋರಣೀಯನ ಮಹತೋಮಹೀಯನ
ಅಪ್ರಮೇಯನ ಆಡಿಸಿದೆಳೆಶೋದಾ

ಪರಮ ಪುರುಷನ ಪರವಾಸು ದೇವನ
ಪುರಂದರ ವಿಠ್ಠಲನ ಆಡಿಸಿದಳೆಶೋದಾ

 ಕೇಳಿರೀ ಈ ಹಾಡನ್ನು 
ಎಮ್ಮೆಸ್  ಸುಬ್ಬಲಕ್ಷ್ಮೀಯವರು  ಹಾಡಿದ ಪದ, ಯೂಟ್ಯೂಬ್  ನಲ್ಲಿ
ಜಗದೋಧ್ಧಾರನ-ಕದರಿ ಗೋಪಾಲನಾಥ್ ಹಾಗು ಪ್ರವೀಣ್ ಗೋಡ್ಖಿಂಡಿ

ವರ್ಗ: ಪುರಂದರದಾಸ ಸಾಹಿತ್ಯ